ಮಂಗಳಂ
ಮಂಗಳಂ ಜಯ ಜಯ ಮಂಗಳಂ
ಮಂಗಳಂ ಶುಭ ಶುಭ ಮಂಗಳಂ ||
ಜಲದಲಿ ಚಲಿಸುವ ಮತ್ಸ್ಯನಿಗೆ
ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಾಹವತಾರಗೆ
ಚಿಕ್ಕ ಮಗುವ ಕಾಯ್ದ ಶ್ರೀ ನರಸಿಂಹಗೆ || ಮಂಗಳಂ||
ಭೂಮಿಯ ದಾನವ ಬೇಡಿದಗೆ
ಆ ಮಹಾಕ್ಷತ್ರಿಯರ ಗೆಲಿದವಗೆ
ರಾಮಚಂದ್ರನೆಂಬ ದಶರಥಸುತನಿಗೆ
ಸತ್ಯಭಾಮೆಯರರಸ ಗೋಪಾಲಕೃಷ್ಣಗೆ ||ಮಂಗಳಂ ||
ಬತ್ತಯಲಿ ನಿಂತ ಬೌದ್ಧನಿಗೆ
ಉತ್ತಮ ಹಯವೇರಿದ ಕಲ್ಕ್ಯನಿಗೇ
ಹತ್ತವತಾರದಿ ಭಕ್ತರ ಸಲಹುವ
ಕರ್ತೃ ಶ್ರೀ ಪುರಂದರ ವಿಠಲನಿಗೆ || ಮಂಗಳಂ ||
Comments
Post a Comment