ಮನೆಯೊಳಗಾಡೋ ಗೋವಿಂದ

 

ಮನೆಯೊಳಗಾಡೋ ಗೋವಿಂದ, 
ನೀ ನೆರೆ ಮನೆಗಳಿಗೆ ಪೋಗುವದೇನೋ ಚಂದಾ ||ಪ||

ನೊಸಲಿಗೆ ತಿಲಕವನಿಡುವೆ,
ಅಚ್ಚ ಹೊಸ ಬೆಣ್ಣೆಯನಿಕ್ಕಿ ಕಜ್ಜಾಯ ಕೊಡುವೆ |
ಹೊಸ ಆಭರಣಗಳನಿಡುವೆ, 
ಮುದ್ದು ಹಸುಳೆ ನಿನ್ನನು ನೋಡಿ ಸಂತೋಷ ಪಡುವೆ ||ಮನೆ||

ಅಣ್ಣಯ್ಯ ಬಲರಾಮಸಹಿತ, 
ನೀನಲ್ಲಲ್ಲಿ ತಿರುಗಾಡುವುದೇನು ವಿಹಿತ |
ಹೆಣ್ಣುಗಳೇಕೋ ಸಂಗಾತ,
ಎನ್ನ ಬಿನ್ನಪವನು ಪರಿಪಾಲಿಸೊ ದಾತ ||ಮನೆ||

ಚೋರನೆನಿಸಿಕೊಳಲೇಕೋ, 
ಲಕ್ಷ್ಮೀನಾರಾಯಣನೆಂಬ ಬಿರುದು ನಿನಗೇಕೋ |
ವಾರಿಜಾಕ್ಷರನ ಕೂಟ ಸಾಕೋ, 
ಮುದ್ದು ಪುರಂದರವಿಠಲ ನೀ ಮನೆಯೊಳಿರಬೇಕು ||ಮನೆ|| 

 

Comments

Popular Posts