ತಂಬೂರಿ ಮೀಟಿದವ
ತಂಬೂರಿ ಮೀಟಿದವ, ಭವಾಬ್ಧಿ ದಾಟಿದವ
ತಾಳವ ತಟ್ಟಿದವ, ಸುರರೊಳು ಸೇರಿದವ ||ಪ ||
ಗೆಜ್ಜೆಯ ಕಟ್ಟಿದವ, ಖಳರೆದೆಯ ಮೆಟ್ಟಿದವ |
ಗಾಯನ ಪಾಡಿದವ, ಹರಿಮೂರುತಿ ನೋಡಿದವ ||ತಂಬೂರಿ||
ಪುರಂದರ ವಿಠ್ಠಲನ ನೋಡಿದವ
ವಿಠ್ಠಲನ ನೋಡಿದವ, ವೈಕುಂಠಕೆ ಓಡಿದವ |
ವಿಠ್ಠಲನ ನೋಡಿದವ, ವೈಕುಂಠಕೆ ಓಡಿದವ ||ತಂಬೂರಿ||
Comments
Post a Comment