ರಾಮ ರಾಮ ನೆಂಬೋ

 

ರಾಮ ರಾಮ ನೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ

ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ

ಶ್ರೀಮನ್ ನಾರಾಯಣ ಜಗಕೆ  || ಪ||


ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ |

ಬೆತ್ತವ ಬೆನ್ನಲಿ ಪೊತ್ತನು ರಾಮ ಕೂರ್ಮಾವತಾರಕ್ಕೆ || ರಾಮ ||


ಭೂಮಿಯ ಪೊತ್ತು ನೀರೊಳು ಮುಳುಗಿದ ವರಾಹವತಾರಕ್ಕೆ |

ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದನ ಸಲಹುದಕೆ || ರಾಮ||


ಭೂಮಿಯದಾನವ ಬೇಡಿದ ರಾಮ ವಾಮನವತಾರಕ್ಕೆ |

ತಾಯಿಯ ಶಿರವನು ಅಳಿದನು ರಾಮ ಭಾರ್ಗವತಾರಕ್ಕೆ ||ರಾಮ ||


ವನವಾಸವ ಮಾಡಿದ ರಾಮ ಜನಕನ ವಾಕ್ಯಕ್ಕೆ |

ಮಾವ ಕಂಸನ ಕೊಂದನು ಕೃಷ್ಣ ತಾಯಿಯ ಬಿಡಿಸಲಿಕ್ಕೆ || ರಾಮ ||


ಸತಿಯರ ವ್ರತಗಳ ಕೆಡಿಸಿದ ರಾಮ ತ್ರಿಪುರರ ಗೆಲುವುದಕೆ |

ವಾಹನ ಬಿಟ್ಟು ತುರಗವ ನೇರಿದ ಕಲ್ಯವತಾರಕ್ಕೆ || ರಾಮ ||


ಶ್ಯಾಮಲ ವರ್ಣವ ತಾಳಿದ ರಾಮ ಸಮರ್ಥ್ಯನು ಜಗಕೆ |

ಸ್ವಾಮಿ ಶ್ರೀ ಪುರಂದರ ವಿಠಲನು ರಾಮ ಗೋವಿಂದನು ಜಗಕೆ ||ರಾಮ ||

Comments

Popular Posts