ಐದು ಕಾಲಿನ ಮಂಚ

 

ಐದು ಕಾಲಿನ ಮಂಚ ಕುಂಟಮಲಗಿದ್ದ

ಮೂರು ದಂಟೆಗಳನ್ನು ಬಗಲಿಗಿಳಿಸಿದ್ದ||ಪ||


ಇದ್ದೈದು ಕಾಲಿಗು ಕೈಕಾಲು ಬಂತು |

ಕುಂಟ ಮಲಗಿದ್ದಂತೆ ಮಂಚ ಧಾವಿಸಿತು || ಐದು ||


ಆರು ಜನ ದಾಂಡಿಗರು ಕೈ ಹಿಡಿದರೆಳುದು |

ಜಾರಿ ಬಿದ್ದನು ಕುಂಟ ಪಕ್ಕೆಲುಬು ಮುರಿದು ||ಐದು||


ಏಳಯ್ಯ ಕುಂಟಯ್ಯ ದಂಟೆ ಹಿಡಿದೇಳು |

ಕೋಳಿ ಹಾಡುವ ಸುಪ್ರಭಾತವನು ಕೇಳಿ ||ಐದು||


ಈ ಐದು ,ಈ ಮೂರು, ಈ ಆರು ಸಾಕು |

ಹದಿನೆಂಟು ಬೇಕು ಬಿಡಬೇಕು ಹದಿನಾಲ್ಕು ||ಐದು||


Comments

Popular Posts