ವಾಣಿ ಪರಮ ಕಲ್ಯಾಣಿ
ವಾಣಿ ಪರಮ ಕಲ್ಯಾಣಿ
ನಮೋ ನಮೋ, ಅಜನ ರಾಣಿ ಪಂಕಜಪಾಣಿ ।।ಪ ।।
ಫಳಿರೆ ಫಳಿರೆಯೆಂಬೆ ಭಕ್ತಜನ ಸುಖದಾಂಬೆ
ಸುಳಿದಾಡು ಶುಭಾನಿತಂಬೆ ಅಂಬೇ ….. ।। ಅ ಪ ।।
ಹೊಳೆ ಹೊಳೆವ ಮುಖ ಮುಕುರಬಿಂಬೆ
ಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿಗೊಂಬೆ ।
ಶರಣು ಶರಣಲೇ ದೇವಿ ಸ್ಮರಣೆಮಾತ್ರದಿ ಕಾಯ್ವೆ
ಚರಣದಂದುಗೆ ಕೀವಿ ಮೆರೆವೆ ವಾಗ್ದೇವಿ ।। ವಾಣಿ ।।
ನಲಿನಲಿವಾ ಆಭರಣಗಳ ಧರಿಸಿ ನಟಿಸುವಿ ದೇವಿ
ಇಳೆಯೊಳಗೆ ಹರಿಣಾಕ್ಷಿ ಸಲಹು ಕಾಮಾಕ್ಷಿ ।
ಜಯ ಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆ
ದಯಮಾಡು ದವಳಗೀತೆ ಮಾತೇ ….. ।। ವಾಣಿ ।।
ನಿನ್ನಿಂದ ವಿದ್ಯೆ ಬುದ್ಧಿ ಅರಿಯೊಲುವೇ ಅಮ್ಮ
ನಿನ್ನ ನಂಬಿದೆ ತಾಯೇ ನೀ ಬಂದು ಕಾಯೇ ।
ಸತತ ಶ್ರೀ ಹಯವದನ ಪದ ಸೇವಕ ಪ್ರೀತೆ
ಕ್ಷಿತಿಯೊಳಗೆ ಲಯದಿಂದ ತೆಳಿಸೆನ್ನ ಮಾತೆ ವಿಧಿಜಾತೆ ।।ವಾಣಿ ।।
Comments
Post a Comment