ಶ್ರೀ ಮಹಾಲಿಂಗೇಶ್ವರ ಪ್ರಸನ್ನ
ಹನುಮನ ಮತವೆ ಹರಿಯ ಮತವು
ಹರಿಯ ಮತವೆ ಹನುಮನ ಮತವು || ಪ ||
ಹನುಮನ ನಂಬಿದ ಸುಗ್ರೀವ ಗೆದ್ದ
ಹನುಮನ ನಂಬದ ವಾಲಿಯು ಬಿದ್ದ ||ಹನುಮನ ||
ಹನುಮನ ನಂಬಿದ ವಿಭೀಷಣ ಗೆದ್ದ
ಹನುಮನ ನಂಬದ ರಾವಣ ಬಿದ್ದ || ಹನುಮನ ||
ಹನುಮನು ಪುರಂದರ ವಿಠಲನ ದಾಸ
ಪುರಂದರ ವಿಠಲನು ಹನುಮನೊಳ್ ವಾಸ || ಹನುಮನ||
Comments
Post a Comment