ನಾ ನಿನ್ನ ಧ್ಯಾನದೊಳಿರಲು

 

ನಾ ನಿನ್ನ ಧ್ಯಾನದೊಳಿರಲು 
ಮಿಕ್ಕ ಹೀನ ಮಾನವರೇನ ಮಾಡಬಲ್ಲರೋ ರಂಗ ||ಪ||

ಮತ್ಸರಿಸುವರೆಲ್ಲ ಕೂಡಿ ಮಾಡುವರೇನು
ಅಚ್ಯುತ ನಿನದೊಂದು ದಯೆಯಿರಲು |
ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ
ಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೋ ರಂಗ ||ನಾ ನಿನ್ನ||

ಧಾಳಿಲಿ ಕುದುರೆ ವೈಯಾರದಿ ಕುಣಿಯಲು
ಧೂಳು ರವಿಯ ಮೇಲೆ ಮುಸುಕುವುದೆ |
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿಯು ಅಲ್ಲಾಡಬಲ್ಲುದೆ ರಂಗ ||ನಾ ನಿನ್ನ||

ಕನ್ನಡಿಯೊಳಗಿನ ಗಂಟು ಕಂಡು ಕಳ್ಳ
ಕನ್ನವಿಕ್ಕಲವನ ವಶವಹುದೆ |
ನಿನ್ನ ನಂಬಲು ಮುದ್ದು ಪುರಂದರವಿಠಲ
ಚಿನ್ನಕ್ಕೆ ಪುಟವಿಟ್ಟಂತೆ ಅಹುದು ರಂಗ ||ನಾ ನಿನ್ನ|| 

Comments

Popular Posts