ಗಜಚರ್ಮಾಂಭರ
ಗಜಚರ್ಮಾಂಭರ ಗೌರಿಮಹೇಶಗೆ
ಬೆಳಗುವೆ ಮಂಗಳದಾರತಿಯ ||ಪ||
ಗಣಪತಿ ಪಿತ, ಸತಿ ಪಾರ್ವತಿ ಪತಿಗೆ |
ಬೆಳಗುವೆ ಮಂಗಳದಾರತಿಯಾ… ||ಅ ಪ||
ಶಿವಶಂಕರ ಹರ ವರ ಗಂಗಾಧರ
ನಟವರ ಈಶ್ವರಗೆ |
ರುದ್ರ ಭಯಂಕರ ಶಿವ ಅಭಯಂಕರ |
ಗಿರಿಜಾ ವಲ್ಲಭಗೇ…… ||ಗಜಚರ್ಮಾಂಭರ||
ದುಷ್ಟರ ಗೆಲಿದು ,ಶಿಷ್ಟರಿಗೊಲಿದು
ತಾಂಡವಗೈದವಗೆ |
ಢಮರು ತ್ರಿಶೂಲ ,ಉರಗವ ಧರಿಸಿದ |
ನಂಜುಡೇಶನಿಗೇ… ||ಗಜಚರ್ಮಾಂಭರ||
Comments
Post a Comment