ಪಾಲಿಸೆಮ್ಮ ಮುದ್ದು ಶಾರದೆ
ಪಾಲಿಸೆಮ್ಮ ಮುದ್ದು ಶಾರದೆ
ಎನ್ನನಾಲಿಗೆಯಲ್ಲಿ ನಿಲ್ಲಬಾರದೇ ||ಪ||
ಲೋಲ ಲೋಚನ ತಾಯೆ ನಿರುತಾ ನಂಬಿದೆ ನಿನ್ನ|| ಅ ಪ ||
ಅಕ್ಷರಕ್ಷರ ವಿವೇಕವ, ನಿನ್ನ ಕುಕ್ಷಿಯೊಳಿರೇಳು ಲೋಕವ|
ಸಾಕ್ಷಾತ್ಕಾರದಿಂದ ಒಲಿದು ರಕ್ಷಿಸು ತಾಯೆ ||ಪಾಲಿಸೆಮ್ಮ||
ಶೃಂಗೇರಿ ಪುರನೆಲವಾಸಿನಿ, ದೇವಿ ಸಂಗೀತ ಗಾನವಿಲಾಸಿನಿ|
ಮಂಗಳ ಗಾತ್ರಾಳೆ ಬಳಿರೆ ಬ್ರಹ್ಮನ ರಾಣಿ ||ಪಾಲಿಸೆಮ್ಮ||
ಸರ್ವಾಲಂಕಾರದಯೆ ಮೂರುತಿ, ನಿನ್ನ ಚರಣವ ಸ್ತುತಿಸುವೆ ಕೀರುತಿ|
ಗುರುಮೂರ್ತಿ ಪುರಂದರ ವಿಠ್ಠಲನ ಸ್ತುತಿಸುವೆ ||ಪಾಲಿಸೆಮ್ಮ||
Comments
Post a Comment