ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ||ಪ||
ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿ
ನಾನು ಎಂಬ ಮೋಹ ಮರೆತು ಎಂದೂ ಅವನ ನಂಬಿರಿ |
ಹೇಗೆ ಇರಲಿ ಎಲ್ಲೆ ಇರಲಿ…ಅವನ ಸ್ಮರಣೆ ಮಾಡಿರಿ….
ಧ್ಯಾನದಿಂದ ಮನವ ಸುಡುವ ಚಿಂತೆ ದೂರ ಮಾಡಿರಿ ||ರಾಘವೇಂದ್ರ ||
ಮಾನ ಪ್ರಾಣ ಧನವು ಎಲ್ಲ ಸ್ವಾಮಿ ನಿನ್ನದೆನ್ನಿರಿ
ಗುರುವೆ ನಿನ್ನ ಕರುಣೆಯೊಂದೆ ಸಾಕು ನನಗೆ ಎನ್ನಿರಿ |
ಕಲ್ಲು ಮುಳ್ಳೊ ಸಿಡಿಲೊ ಮಳೆಯೊ ಅವನ ಕರುಣೆಯೆನ್ನಿರಿ
ಏನೇ ಬರಲಿ ಅವನದೆಂದು ನಂಬಿ ಮುಂದೆ ನಡೆಯಿರಿ ||ರಾಘವೇಂದ್ರ ||
ನಿಮ್ಮ ಮನೆಯ ನಿಮ್ಮ ಮನದ ವಿಷಯವೆಲ್ಲ ಬಲ್ಲನು
ಚಪಲದಿಂದ ಅಲೆವ ಮನದಲೆಂದು ಗುರುವು ನಿಲ್ಲನು |
ಕೊಡುವುದೆಲ್ಲ ಕೊಡುವನವನು ಇನ್ನು ಆಸೆಯೇತಕೆ
ಕಲ್ಪವೃಕ್ಷದಂತೆ ಗುರುವು ಇರಲು ಚಿಂತೆಯೇತಕೆ ||ರಾಘವೇಂದ್ರ ||
Comments
Post a Comment