ವರವ ಕೊಡೆ ಚಾಮುಂಡಿ

 

ವರವ ಕೊಡೆ ಚಾಮುಂಡಿ ವರವ ಕೊಡೆ|

ಸೆರಗೊಡ್ಡಿ ಬೇಡುವೆನೂ ವರವ ಕೊಡೆ, ವರವ ಕೊಡೆ ||ಪ||


ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ|

ನಿನ್ನಾಣೆ ನಾ ನಿನ್ನ‌ ಪಾದ ಬಿಡೆ ನಿನ್ನ ಪಾದ ಬಿಡೆ||ಅ ಪ||


ಕುಂಕುಮವು ಅರಸಿನವು

ಹೊಳೆವಂತ ಕರಿಮಣಿಯು |

ಸ್ಥಿರವಾಗಿ ಇರುವಂತೆ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ,ವರವ ಕೊಡೆ ||ವರವ||


ಬಾಗಿಲಲಿ ತೋರಣ

ಮದುವೆ ಮುಂಜಿ ನಾಮಕರಣ |

ಯಾವಾಗಲು ಆಗುವಂತೆ ವರವ ಕೊಡೆ

ನಿನ್ನಾಣೆ ನಾ ನಿನ್ನ ಪಾದ ಬಿಡೆ, ನಿನ್ನ ಪಾದ ಬಿಡೆ ||ವರವ||


ಹೆಸರುಳ್ಳ ಮನೆ ಕಟ್ಟಿ

ಹಸು ಕರುಗಳ ಸಾಲುಗಟ್ಟಿ |

ವಂಶವ್ರಧ್ಧಿ ಆಗುವಂತೆ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ, ವರವ ಕೊಡೆ ||ವರವ||


ಮನೆಯಲ್ಲಿ ಹರುಷ ಕೊಟ್ಟು

ಮನದಲ್ಲಿ ಶಾಂತಿ ಕೊಟ್ಟು |

ಭಕ್ತಿ ಹ್ರದಯ ತುಂಬುವಂತೆ ವರವ ಕೊಡೆ

ನಿನ್ನಾಣೆ ನಾ ನಿನ್ನ ಪಾದ ಬಿಡೆ, ನಿನ್ನ ಪಾದ ಬಿಡೆ ||ವರವ||

Comments

Popular Posts