ವೆಂಕಟರಮಣನೆ ಬಾರೋ
ವೆಂಕಟರಮಣನೆ ಬಾರೋ
ಶೇಷಾಚಲವಾಸನೆ ಬಾರೋ ||ಪ||
ಪಂಕಜನಾಭ ಪರಮ ಪವಿತ್ರ
ಶಂಕರ ಮಿತ್ರನೇ ಬಾರೋ ||ಅ.ಪ||
ಮುದ್ದು ಮುಖದ ಮಗುವೆ, ನಿನಗೆ ಮುತ್ತು ಕೊಡುವೆನು ಬಾರೋ |
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ ||ವೆಂಕಟರಮಣನೆ||
ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ನೀ ಬಾರೋ |
ನಂದನ ಕಂದ ಗೋವಿಂದ ಮುಕುಂದ, ಇಂದಿರೆಯರಸನೆ ಬಾರೋ ||ವೆಂಕಟರಮಣನೆ||
ಕಾಮನಯ್ಯ ಕರುಣಾಳು, ಶ್ಯಾಮಲ ವರ್ಣನೆ ಬಾರೋ |
ಕೋಮಾಳಾಂಗ ಶ್ರೀಪುರಂದರ ವಿಠಲನೆ ಸ್ವಾಮಿರಾಯನೆ ಬಾರೋ ||ವೆಂಕಟರಮಣನೆ||
Comments
Post a Comment