ವೆಂಕಟಾಚಲ ನಿಲಯಮ್
ವೆಂಕಟಾಚಲ ನಿಲಯಮ್ ವೈಕುಂಠ ಪುರ ವಾಸಮ್ ||ಪ||
ಪಂಕಜನೇತ್ರಮ್ ಪರಮಪವಿತ್ರಮ್ |
ಶಂಖ ಚಕ್ರಧರ ಚಿನ್ಮಯ ರೂಪಂ ||ಅ ಪ||
ಅಂಭುಜೋದ್ಭವ ವಿನೂತಮ್
ಅಗಣಿತ ಗುಣ ನಾಮಂ |
ತುಂಬುರು ನಾರದ ಗಾನ ವಿಲೋಲಂ|
ಅಂಬುದಿಶಯನಂ ಆತ್ಮಾಭಿರಾಮಮ್ || ವೆಂಕಟಾಚಲ ||
ಪಾಹಿ ಪಾಂಡವ ಪಕ್ಷಮ್
ಕೌರವ ಮದಹರಣಂ |
ಬಾಹು ಪರಾಕ್ರಮ ಪೂರ್ಣಮ್ |
ಅಹಲ್ಯಾ ಶಾಪ ಭಯ ನಿವಾರಣಂ||ವೆಂಕಟಾಚಲ ||
ಸಕಲ ವೇದ ವಿಚಾರಮ್
ಸರ್ವಜೀವ ನಿಕರಂ |
ಮಕರ ಕುಂಡಲಧರ ಮಧನ ಗೋಪಾಲಂ |
ಭಕ್ತಪೋಷಕ ಶ್ರೀ ಪುರಂದರ ವಿಠ್ಠಲಮ್ || ವೆಂಕಟಾಚಲ ||
Comments
Post a Comment