ನಮೋ ಪಾರ್ವತಿ ಪತಿನುತ

 

ನಮೋ ಪಾರ್ವತಿ ಪತಿನುತ ಜನಪರ 
ನಮೋ ವಿರೂಪಾಕ್ಷ,  ನಮೋ ವಿರೂಪಾಕ್ಷ || ಪ||

ರಮಾರಮಣನಲ್ಲಮರಭಕುತಿ ಕೊಡು
ನಮೋ ವಿಶಾಲಾಕ್ಷ, ನಮೋ ವಿರೂಪಾಕ್ಷ ||ಅ ಪ||


ನೀಲಕಂಠ ತ್ರಿಶೂಲಢಮರು ಹಸ್ತಾಲಂಕ್ರತ ರಕ್ಷಾ

ಪಾಲನೇತ್ರ ಕಪಾಲರುಂಡ ಮಣಿಮಾಲ ಧ್ರತವಕ್ಷ ||

ಶೀಲರಮ್ಯ ವಿಶಾಲ ಸುಗುಣ ಸಲ್ಲೀಲಸುರಾಧ್ಯಕ್ಷ

ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷಾ ||ನಮೋ ಪಾರ್ವತಿ||


ವಾಸವನುತ ಹರಿದಾಸ ಈಶ ಕೈಲಾಸ ವಾಸದೇವ

ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ ||

ಭಾಸಿಸುತಿಹುದ ಶೇಷಜೀವರಿಗೆ ಈಶನೆಂಬ ಭಾವ

ಶ್ರೀಶನಲ್ಲಿ ಇರಿಸು ಮನವ ಗಿರಿಜೇಶ ಮಹಾದೇವಾ ||ನಮೋ ಪಾರ್ವತಿ||


ಮ್ರತ್ಯುಂಜಯ ನಿನ್ನುತ್ತಮ ಪದಯುಗ ಭ್ರತ್ಯನು ಸರ್ವತ್ರ

ಹತ್ತಿರ ಕರೆದು ಅಪತ್ಯನಂದದಿ ಪೊರೆಯುತ್ತಿರೊ ತ್ರಿನೇತ್ರ ||

ಹೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ

ಕತ್ರ್ ಉಡುಪಿ ಸರ್ವೋತ್ತಮ ಕ್ರಷ್ಣನ ಪೌತ್ರಕ್ರಪಾ ಪಾತ್ರ ||ನಮೋ ಪಾರ್ವತಿ||

Comments

Popular Posts