ದಾರಿ ಕಾಣದಾಗಿದೆ
ದಾರಿ ಕಾಣದಾಗಿದೆ ರಾಘವೇಂದ್ರನೆ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೆ ||ಪ||
ಮನದ ಆಸೆ ತಿಳಿಸುವಾಸೆ ಹೇಗೆ ಹೇಳಲಿ
ನಾಳೆ ಹೇಗೆ ಎಂಬ ಚಿಂತೆ ಇಂದು ಎದೆಯಲಿ |
ಕಲ್ಲು ಮುಳ್ಳು ಏನೆ ಇರಲಿ ಬಾಳ ಹಾದಿಲಿ
ನಿನ್ನ ಕರುಣೆ ಇಂದ ಎಲ್ಲ ಸುಮಗಳಾಗಲಿ ||ದಾರಿ||
ಯಾರ ಯಾರ ಸೇರಿಸುವೆಯೊ ಯಾರೂ ಅರಿಯರು
ಯಾರ ನಗಿಸಿ ಅಳಿಸುವೆಯೋ ಯಾರು ಬಲ್ಲರು |
ನೀನು ಕುಣಿಸಿದಂತೆ ತಾನೆ ಎಲ್ಲ ಕುಣಿವರು
ಜ್ಯೋತಿ ನೀನು ಬರಿಯ ಮಣ್ಣ ಹಣತೆ ಎಲ್ಲರು ||ದಾರಿ||
Comments
Post a Comment