ಹರೇ ವೆಂಕಟಾ ಶೈಲವಲ್ಲಭ

 

ಹರೇ ವೆಂಕಟಾ ಶೈಲವಲ್ಲಭ

ಪಾಲಿಸು ನೀ ಎನ್ನಾ ||ಪ||


ದುರಿತ ದೂರ ನೀನಲ್ಲದೆ ಧರೆಯೊಳು

ದೊರೆಗಳ ನಾ ಕಾಣೆ , ನಿನ್ನಾಣೆ ||ಅ ಪ||


ಇಂದಿರೇಶ ಅರವಿಂದ ನಯನ ಎನ್ನ ತಂದೆ ತಾಯಿ ನೀನೆ |

ಹೊಂದಿದವರ ಅಘಂಗಳ ಕಳೆವ ಶ್ರೀ ಮಂದರಾದ್ರಿ ಧರನೆ, ಶ್ರೀಧರನೆ ||ಹರೇ ವೆಂಕಟಾ||


ಯಾರು ನಿನ್ನ ಹೊರತೆನ್ನನು ಕಾಯ್ವರು ನೀರಜಾಕ್ಷ ಹರಿಯೇ|

ಘೋರ ದುರಿತಗಳ ದೂರ ಮಾಡಲಿಕೆ ಬೇರೆ ದೈವ ಕಾಣೆ , ನಿನ್ನಾಣೆ ||ಹರೇ ವೆಂಕಟಾ||


ಮಂಗಳಾಂಗ ಮಹನೀಯ ಗುಣಾರ್ನವ ಗಂಗೋಧಿತ ಪಾದ|

ಅಂಗಜಪಿತ ಅಹಿರಾಜ ಶಯನ ಶ್ರೀರಂಗವಿಠ್ಠಲ ದೊರೆಯೆ, ಶ್ರೀಹರಿಯೆ ||ಹರೇ ವೆಂಕಟಾ||

Comments

Popular Posts