ಎಂದಿಗಾಹುದೋ ನಿನ್ನ ದರುಶನ

 

 ಎಂದಿಗಾಹುದೋ ನಿನ್ನ ದರುಶನ  
ಇಂದಿರೇಶ ಮುಕುಂದ ಕೇಶವ              ।।ಪ॥

ಗಾನಲೋಲನೆ ದೀನವತ್ಸಲ 
ಮಾನದಿಂದಲಿ ನೀನೆ ಪಾಲಿಸೋ          ।।೧।।

ಯಾರಿಗೆ ಮೊರೆ ಇಡಲಿ ಶ್ರೀಹರಿ 
ಸಾರಿ ಬಂದು ನೀ ಈಗಲೇ ಪೊರೆ       ।।೨।।

ಗಜವ ಪಾಲಿಸೊ ಗರುವದಿಂದಲಿ 
ಭುಜಗಶಯನ ಶ್ರೀ ವಿಜಯವಿಠಲಾ       ।।೩।।

Comments

Popular Posts