ಹಕ್ಕಿಯ ಹೆಗಲೇರಿ

 

ಹಕ್ಕಿಯ ಹೆಗಲೇರಿ ಬಂದವಗೆ

ನೋಡಕ್ಕ ಮನಸೋತೆ ನಾನವಗೆ ||ಪ||


ಸತ್ರಾಜಿತನ ಮಗಳೆತ್ತಿದ

ಉನ್ಮತ್ತ ನರಕನೊಳು ತಾ ಕಾದಿದ |

ಮತ್ತೆ ಕೆಡಹಿದ ಅವನಂಗವ 

ಸತಿಗಿತ್ತನು ತಾ ಆಲಿಂಗನವ || ಹಕ್ಕಿಯ||


ಹದಿನಾರು ಸಾವಿರ ನಾರಿಯರ 

ಸೆರೆ ಮುದದಿಂದ ಬಿಡಿಸಿ ಮನೋಹರ |

ಅದಿತಿಯ ಕುಂಡಲ ಕಳಿಸಿದ 

ಹರಿ ವಿಧಿಸುರನೃಪರನು ಸಲಹಿದ ಧೀರ || ಹಕ್ಕಿಯ||


ನರಕಚತುರ್ದಶಿ ಪರ್ವದ 

ದಿನ ಹರುಷದಿ ವ್ರಕಟಾದನು ದೇವ |

ಶರಣಾಗತಜನ ವತ್ಸಲಾ 

ರಂಗ ಪರಮ ಭಾಗವತರ ಪರಿಪಾಲ || ಹಕ್ಕಿಯ||


ಹೊಗಳಿ ಕೃಷ್ಣಯ್ಯನ ಮಹಿಮೆಯ

 ಮುಕ್ತಿ ನಗರದ ಅರಸನ ಕೀರ್ತಿಯಾ |

ಜಗದೀಶ ಪ್ರಸನ್ವೆಂಕಟೇಶನು 

ಭಕ್ತರಘಹಾರಿ ರವಿ ಕೋಟಿಪ್ರಕಾಶನು || ಹಕ್ಕಿಯ||

Comments

Popular Posts