ಲಿಂಗಯ್ಯ ಮಾತನಾಡೋ

 

ಲಿಂಗಯ್ಯ ಮಾತನಾಡೋ

ದೋಂಟದ ಸಿದ್ದಲಿಂಗಯ್ಯ ಮಾತನಾಡೋ ||ಪ ||


ಸಂಗಾನ ಶರಣಾರ ಅಂಗೈಯೊಳಗಿರುವಂಥ |

ಲಿಂಗಯ್ಯ ಮಾತನಾಡೋ || ಅ ಪ||


ಹರನೇ ನೀ ಮಾತನಾಡೋ

ಅಭವನೆಂಬ, ಸುರನೇ ನೀ ಮಾತನಾಡೋ |

ಸುರರ ದೇವರ್ಕಾಳ ಬರಿತಾನೊಳಗೆ ನೀ 

ಮರೆಯಾತ ಮಾತನಾಡೋ 

ದೋಂಟದ ಸಿದ್ದಲಿಂಗಯ್ಯ ಮಾತನಾಡೋ ||ಲಿಂಗಯ್ಯ ||


ಅಕ್ಷಯ ಮಾತನಾಡೋ , 

ಅಭವನೆಂಬ ಕುಕ್ಷೀಯಾ ಮಾತನಾಡೋ |

ಕುಕ್ಷೀಯೊಳಗೆ ತ್ರೈಲೋಕಾವಾ ಸಲುವಂಥ 

ರಕ್ಷಿತ ಮಾತನಾಡೋ 

ದೋಂಟದ ಸಿದ್ದಲಿಂಗಯ್ಯ ಮಾತನಾಡೋ || ಲಿಂಗಯ್ಯ ||


ಜಂಗಮ ರೂಪಿನಿಂದ

ಜಗವ ನೋಡಬಂದಂಥ, ತಂದೆ ನೀ ಮಾತನಾಡೋ |

ಜಂಗುಳಿ ದೈವದೊಡೆಯ 

ದೋಂಟದ ಸಿದ್ದಲಿಂಗಯ್ಯ ಮಾತನಾಡೋ || ಲಿಂಗಯ್ಯ||

Comments

Popular Posts