ಕಮಲದ ಮೊಗದೊಳೆ

 

ಕಮಲದ ಮೊಗದೊಳೆ, ಕಮಲದ ಕಣ್ಣೋಳೆ, ಕಮಲವ ಕೈಯಲ್ಲಿ ಹಿಡಿದೊಳೆ
ಕಮಲನಾಭನ ಹೃದಯ ಕಮಲದಲಿ ನಿಂತೋಳೆ, ಕಮಲಿ ನೀ ಕರಮುಗಿವೆ ಬಾಮ್ಮಾ
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ|||ಪ|

ಕಾವೇರಿ ನೀರ ಅಭಿಷೇಕಕಾಗಿ ನಿನಗಾಗಿ ನಾ ತಂದೆನಮ್ಮ
ಕಂಪನ್ನು ಚೆಲ್ಲೋ ಸುಮರಾಶಿಯಿಂದ ಹೂಮಾಲೆ ಕಟ್ಟಿರುವೆನಮ್ಮ|
ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ ತುಂಬುವಂತೆ. |
ನಲಿಯುತ.. ಕುಣಿಯುತ.. ಒಲಿದು ಬಾ.. ನಮ್ಮ ಮನೆಗೆ ಬಾ..||ಕಮಲದ||

ಶ್ರೀದೇವಿ ಬಾಮ್ಮಾ ಧನಲಕ್ಷ್ಮಿ ಬಾಮ್ಮಾ ಮನೆಯನ್ನು ಬೆಳಕಾಗಿ ಮಾಡು
ದಯೆತೋರಿ ಬಂದು ಮನದಲ್ಲಿ ನಿಂತು ಸಂತೋಷ ಸೌಭಗ್ಯ ನೀಡು |
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾಯೇ ವರಮಹಾಲಕ್ಷ್ಮಿಯೇ ಹರಸು |
ಕರವನು ಮುಗಿಯುವೆ.. ಆರತಿ ಈಗ ಬೆಳಗುವೆ..||ಕಮಲದ||


Comments

Popular Posts