ಸಿಂಹರೂಪನಾದ

 

ಒಮ್ಮನದಿಂದ ನಿಮ್ಮನು ಭಜಿಸಲು

ಸಮ್ಮತದಿಂದ ಕಾಯುವೆನೆಂದ ಹರಿ                ||ಅ.ಪ||


ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ 

ಸಿಂಹರೂಪನಾದ ಶ್ರೀ ಹರಿ  ||ಪ||


ತರಳನು ಕರೆಯೆ ಸ್ಥಂಭವು ಬಿರಿಯೇ

ತುಂಬು ಉಗ್ರವ ತೋರಿದನು |

ಕರುಳನು ಬಗೆದು ಕೊರಳೊಳಗಿಟ್ಟು

ತರಳನ ಸಲಹಿದ ಶ್ರೀ ನರಸಿಂಹನೆ                   ||ಸಿಂಹರೂಪ||


ಭಕ್ತರೆಲ್ಲ ಕೂಡಿ ಬಹು ದೂರ ಓಡಿ

ಪರಮ ಶಾಂತವನು ಬೇಡಿದರು|

ಕರೆತಂದು ಸಿರಿಯ ತೊಡೆಯೊಳು ಕುಳಿಸಿದ

ಪರಮ ಹರುಷ ಹೊಂದಿದ ಶ್ರೀ ಹರಿ           ||ಸಿಂಹರೂಪ||


ಜಯ ಜಯ ಜಯವೆಂದು ಹೂವನು ತಂದು

ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ

ಭಯ ನಿವಾರಣ ಭಾಗ್ಯ ಸ್ವರೂಪನೇ

ಪರಮ ಪುರುಶ ಶ್ರೀ ಪುರಂದರ ವಿಟ್ಟಲನೆ           ||ಸಿಂಹರೂಪ||


Comments

Popular Posts