ದಾಸನ ಮಾಡಿಕೊ

 

ದಾಸನ ಮಾಡಿಕೊ ಎನ್ನ 

ಸ್ವಾಮಿ ಸಾಸಿರನಾಮದ ವೆಂಕಟರಮಣ          ||ಪ||


ದುರುಬುದ್ಧಿಗಳನೆಲ್ಲ ಬಿಡಿಸೊ 

ನಿನ್ನಕರುಣ-ಕವಚವೆನ್ನ ಹರಣಕ್ಕೆ ತೊಡಿಸೊ|

ಚರಣಸೇವೆ ಎನಗೆ ಕೊಡಿಸೊ 

ಅಭಯ ಕರಪುಷ್ಪವ ಎನ್ನ ಶಿರದಲ್ಲಿ ಮುಡಿಸೊ               ||ದಾಸನ||


ದೃಢಭಕ್ತಿ ನಿನ್ನಲ್ಲಿ ಬೇಡಿ 

ನಾ ಅಡಿಗೆರಗುವೆನಯ್ಯ ಅನುದಿನ ಪಾಡಿ |

ಕಡೆಗಣ್ಣಲೇಕೆನ್ನ ನೋಡಿ

ಬಿಡುವೆ ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ          ||ದಾಸನ||


ಮೊರೆಹೊಕ್ಕವರ ಕಾಯುವ ಬಿರುದು

 ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು |

ದುರಿತ ರಾಶಿಗಳೆಲ್ಲ ತರಿದು 

ಸಿರಿ ಪುರಂದರ ವಿಠಲ ಎನ್ನನು ಪೊರೆದು                 ||ದಾಸನ||


Comments

Popular Posts