ಬಾರೆ ನಮ್ಮನಿ ತನಕ
ಬಾರೆ ನಮ್ಮನಿ ತನಕ
ಭಾಗ್ಯದ ದೇವಿ ಬಾರೆ ನಮ್ಮನಿ ತನಕ ||ಪ||
ಬಾರೆ ನಮ್ಮನಿ ತನಕ ಬಹಳ ಕರುಣದಿಂದ
ಜೋಡಿಸಿ ಕರಗಳ ಎರಗುವೆ ಚರಣಕೆ ||ಅ ಪ||
ಜರದ ಪೀತಾಂಬರ ನಿರಿಗೆಗಳಲೆಯುತ|
ತರಳನ ಮ್ಯಾಲೆ ತಾಯಿ ಕರುಣಿಸಿ ಬೇಗನೆ ||ಬಾರೆ||
ಹರಡಿ ಕಂಕಣದುಂಡು ಕರದಲ್ಲಿ ಹೊಳೆಯುತ|
ಸರಗಿ ಸರವು ಚಂದ್ರ ಹಾರಗಳ್ಹೊಲೆಯುತ ||ಬಾರೆ||
ಮಂದಗಮನೆ ನಿನಗೆ ವಂದಿಸಿ ಎರಗುವ |
ಇಂದಿರೇಶನ ಕೂಡಿ ಇಂದು ನಮ್ಮನಿತನಕ ||ಬಾರೆ||
Comments
Post a Comment