ಪಾಹಿಶಿವೆ ಪಾಹಿಶಿವೆ
ಪಾಹಿಶಿವೆ ಪಾಹಿಶಿವೆ ಪರಮ ಕಲ್ಯಾಣಿ |
ಪಾಲಿಸೆಮ್ಮ ಪಾಪನೀಗಿ ಮಹಿಷ ಮರ್ಧಿನಿ ||ಪ||
ನಿನ್ನ ಕರುಣೆ ಭಿಕ್ಷೆಯಿದು ಶಿವನ ಬೇಡಿಕೆ
ಅನುಪಮಾನ ನರರ ನೀನು ಕಾಯೆ ಅಂಬಿಕೆ |
ಮಾತೆ ಚರಣ ಕಮಲದಲ್ಲಿ ಇರಿಸಿ ನಂಬಿಕೆ
ಮನುಜ ಕುಲವೆ ತ್ರಾಹಿ ಎನಲು ನೀಡು ಕೋರಿಕೆ ||ಪಾಹಿಶಿವೆ||
ರೌದ್ರರೂಪ ತಾಳಿದಂಥ ಸಿಂಹವಾಹಿನಿ
ಚಂಡ ಮುಂಡ ರಕ್ತಬೀಜ ಧನುಜ ಧ್ವಂಸಿನಿ |
ಮರಹಧಾರೆ ಇಳೆಯಧಾತೆ ಮಾರ್ಗದರ್ಶಿನಿ
ಶರಣು ಬಂದ ಜನಕೆ ನೀನು ಭಾಗ್ಯದಾಯಿನಿ ||ಪಾಹಿಶಿವೆ||
Comments
Post a Comment