ನಟವರ ಗಂಗಾಧರ

 

ನಟವರ ಗಂಗಾಧರ, ಉಮಾಶಂಕರ 

ಈ ಲೀಲಾ ವಿನೋದ ವಿಹಾರಾ |

ನಟವರ ಗಂಗಾಧರ ||ಪ||


ಜನನ ಮರಣೊಂದು ಚದುರಂಗವಾಗಿ

ಜನರೇ ಕಾಯಾಗಿ |

ನೀನೆ ಕಲಿಯಾಗಿ ರಣರಂಗ ಸಾಗಿ 

ನಗುವೆ ನೀ ತೂಗಿ ||ನಟವರ||


ತೋರಿ ನಲವಿಂದ ನೀ ಬಾಳಿನಂದ

ಭ್ರಮೆಯ ತುಂಬಿಡುವೇ |

ದಾರಿ ಕವಲಾಗಿ ಮನ ಮಾರುವಾಗ

ಪ್ರಭುವೇ ಮುಂದಿಡುವೇ ||ನಟವರ||


ಜ್ಞಾನ ಗುಣಮಾಲಾ ಕರುಣಾಲ ವಾಲ

ತಿಳಿಯೇ ನೀ ಲೀಲಾ |

ದೇವ ಘನತುಂಗ ಮಹಿಮಾಂತರಂಗ 

ಭಲರೇ ಜಲಪಾಲಾ ||ನಟವರ||

Comments

Popular Posts