ನಲಿದಾಡೇ

 

ಕುಣಿದಾಡೆ ನೀ ನಲಿದಾಡೇ |

ಅಮ್ಮಾ ನಲಿದಾಡೇ ನೀ ಕುಣಿದಾಡೆ ||


ನಲಿದಾಡೇ ಎನ್ನ ನಾಲಿಗೆ ಮ್ಯಾಲೆ | ಶಾರದಾದೇವಿ ||

ಕುಣಿದಾಡೆ ಎನ್ನ ನಾಲಿಗೆ ಮ್ಯಾಲೆ , ನಾಲಿಗೆ ಮ್ಯಾಲೆ || ಪ||


ಘಿಲು ಘಿಲು ಘಿಲು ಗೆಜ್ಜೆಯ ನಾದ |

ಹೊಳೆವ ಅಂದುಗೆ ರುಳಿ ಪೈಂಜಣವಿಟ್ಟ ಪುಟ್ಟ ಪಾದ , ಸುರವರನುತ ಪಾದ ||

ಸರಸಿಜೋದ್ಭವನ ವದನ ನಿಲಯಳೆ|

ಕರುಣದಿಂದ ಪರಿಪಾಲಿಸು ಮಾತೆ ||ನಲಿದಾಡೇ||


ನಸುನಗೆ ಮುಖವು ನಾಸಾಭರಣ |

ಎಸೆವ ಕಪೋಲ ಹೊಸ ಮುತ್ತಿನ ಚಳ ತುಂಬಿಟ್ಟ ಶ್ರವಣ, ತಿಲಕವು ಹಸನ ||

ಶಶಿ ಸೂರ್ಯರ ಆಭರಣ ಶೋಭಿತಳೆ |

ಕುಸುಮ ಮುಡಿದ ಮೂರ್ಧ್ವಜವುಳ್ಳವಳೆ ||ನಲಿದಾಡೇ||


ಶೃಂಗಾರವಾದ ಜಡೆ ಬಂಗಾರ |

ರಾಗುಟಿ ಶೌರಿ ಹೊಂಗ್ಯಾದಿಗೆ ಗೊಂಡೆ ಮುತ್ತಿನ ಹಾರ, ರಂಗು ಮನೋಹರ ||

ಮಂದಗಮನೆ ಅರವಿಂದ ನಯನ ಸಿರಿ |

ರಂಗ ವಿಟ್ಟಲನ ತೋರೇ ಶುಭಾಂಗಿ ||ನಲಿದಾಡೇ||

Comments

Popular Posts