ಕಾಡ ಬೆಳದಿಂಗಳು

 

ಕಾಡ ಬೆಳದಿಂಗಳು , ಈ ಸಂಸಾರ | 
ಕತ್ತಲೆ ಬೆಳದಿಂಗಳು ||ಪ||

ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಂದು ಬಾಗಿಲ ಕಾಯ್ವರು |
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಕತ್ತ ಮೇಲಕ್ಕೆ ಎತ್ತುವರು ||ಕಾಡ||

ಏರುವ ದಂಡಿಗೆ ನೂರಾಳು ಮಂದಿಯು
ಮೂರು ದಿನದ ಭಾಗ್ಯ ಝಣಝಣವು |
ನೂರಾರುಸಾವಿರ ದಂಡವ ತೆತ್ತರೆ
ರಂಗವಿಠ್ಠಲನೇ ಸರಿಯೆಂಬೊರಯ್ಯ ||ಕಾಡ|| 

Comments

Popular Posts