ದಾರಿ ಯಾವುದಯ್ಯ ವೈಕುಂಟಕೆ
ದಾರಿ ಯಾವುದಯ್ಯ ವೈಕುಂಟಕೆ ದಾರಿ ತೋರಿಸಯ್ಯ ||ಪ||
ದಾರಿ ಯಾವುದಯ್ಯ ದಾರಿ ತೋರಿಸಯ್ಯ |
ಅಧರ ಮುರುತಿ ನಿನ್ನ ಪಾದ ಸೇರುವುದಕ್ಕೆ ||ಅ ಪ||
ಬಲು ಭವದನುಭವದಿ ಕತ್ತಲೆಯೊಳು ಬಲು ಅಂಜುತ ನಡುಗಿ |
ಬಳಲುತ್ತ ತಿರುಗಿದೆ ಹಾದಿಯ ಕಾಣದೆ
ಹೊಳೆವಂಥ ದಾರಿಯ ತೋರೋ ನಾರಾಯಣ ||ದಾರಿ ||
ಪಾಪ ಪೂರ್ವದಲ್ಲಿ ಮಾಡಿದುದಕೆ ಲೇಪವಾಗಿದೆ ಕರ್ಮ |
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಶ್ರೀಪತಿ ಸಲಹೆನ್ನ ಭೂಪ ನಾರಾಯಣ ||ದಾರಿ ||
ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ ನಿನ್ನ ದಾಸನಾದೇನೋ |
ಪನ್ನಗ ಶಯನ ಶ್ರೀಪುರಂದರ ವಿಠ್ಠಲ
ಇನ್ನು ಪುಟ್ಟಿಸದಿರೋ ಎನ್ನ ನಾರಾಯಣ ||ದಾರಿ ||
Comments
Post a Comment