ಕಣ್ಣುಗಳೆರಡು ಸಾಲದಮ್ಮ
ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲು
ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲು||ಪ||
ಯಾವ ಭಾವದಿ ಯಾವ ರಾಗದಿ
ಪಾಡಿ ಹಾಡಲಿ ನಿನ್ನಯ ತಾಯಿ||ಅ ಪ||
ಶರಣಾಗತ ವರದೇ, ವರ ದೇವಿ ಕರುಣ ಸದಯೇ
ಸುರವರ ಪೂಜಿತೆಯೇ, ಕರವೀರ ಪುರಾನಿಲಯೇ |
ದುರಿತ ನಿವಾರಿಣಿ ಭವ ಭಯ ಹಾರಿಣಿ
ಮಂಗಳದಾಯಿನಿ ನಾರಾಯಣಿ ||ಕಣ್ಣುಗಳೆರಡು||
ಪನ್ನಗ ಫಣಿ ವೇಣಿ, ಪದ್ಮಾಸಿನಿ ಹರಿ ರಾಣಿ
ಪದ್ಮ ಗದಾ ಪಾಣಿ, ಪರಮ ಗುಣಾ ಸುಗುಣಿ |
ಇಂದಿರ ನಯನೇ ಚಂದಿರ ವದನೇ
ಅನುಪಮ ಸುಂದರಿ ನಾರಾಯಣಿ ||ಕಣ್ಣುಗಳೆರಡು||
ಧನ ಕನಕವ ಕೊಡುವ ಧನ ಲಕ್ಷ್ಮಿಯು ನೀನಾಗಿ
ಧರೆಯಲಿ ನೆಲೆಸಿರುವೆ ದೀನರ ರಕ್ಷಿಸಲು |
ಸಂಕಟ ಹರಿಸುವ ವೆಂಕಟ ರಮಣಿ
ಆರ್ದ ಪರಾಯಣಿ ನಾರಾಯಣಿ ||ಕಣ್ಣುಗಳೆರಡು||
Comments
Post a Comment