ತಿರುಪತಿ ವೆಂಕಟರಮಣ
ತಿರುಪತಿ ವೆಂಕಟರಮಣ
ನಿನಗೇತಕೆ ಬಾರದು ಕರುಣ|
ನಂಬಿದೆ ನಿನ್ನಯ ಚರಣ
ಪರಿಪಾಲಿಸಬೇಕೊ ಕರುಣ ಕರುಣಾ ||ಪ||
ಅಳಗಿರಿಯಿಂದಲಿ ಬಂದಾ
ಸ್ವಾಮಿ ಅಂಜನಗಿರಿಯಲಿ ನಿಂದ|
ಕೊಳಲ ಧ್ವನಿಯದೋ ಚಂದ
ನಮ್ಮ ಕುಂಡಲರಾಯ ಮುಕುಂದ ಮುಕುಂದ ||ತಿರುಪತಿ||
ಮೂಡಲಗಿರಿಯಲಿ ನಿಂತ
ಮುದ್ದು ವೆಂಕಟಪತಿ ಬಲವಂತ |
ಈಡಿಲ್ಲ ನಿನಗೆ ಶ್ರೀಕಾಂತಾ
ಈರೇಳು ಲೋಕಕನಂತ ಅನಂತ ||ತಿರುಪತಿ||
ಕಾಶೀ ರಾಮೇಶ್ವರದಿಂದ
ಅಲ್ಲಿ ಕಾಣಿಕೆ ಬರುವುದೆ ಚಂದ |
ದಾಸರ ಕೂಡೆ ಗೋವಿಂದ..
ಅಲ್ಲಿ ದಾರಿ ನಡೆವುದೇ ಚೆಂದ... ಚೆಂದ ||ತಿರುಪತಿ||
ಪಾಪ ವಿನಾಶಿನಿ ಸ್ನಾನ
ಹರಿ ಪಾದೋದಕವೇ ಪಾನ |
ಕೋಪತಾಪ ನಿಧಾನ..
ನಮ್ಮ ಪುರಂದರವಿಠಲನ ಧ್ಯಾನ.. ಧ್ಯಾನಧ್ಯಾನ ||ತಿರುಪತಿ||
Comments
Post a Comment