ಚಿಂತ್ಯಾಕೆ ಮಾಡುತಿದ್ದಿ

 

ಚಿಂತ್ಯಾಕೆ ಮಾಡುತಿದ್ದಿ ಚಿನ್ಮಯನಿದ್ದಾನೆ |

ಸ್ವಾಮಿ ಚಿನ್ಮಯನಿದ್ದಾನೆ | 

ಚಿಂತೆ ಬಿಡಿಸುವಂತ ಗೌರಿ ಕಾಂತನಿದ್ದಾನೆ ||ಪ ||


ಎಳ್ಳು ಕೊನೆಯ ಮುಳ್ಳುಮೊನೆಯ |

ಪೊಳ್ಳು ಬಿಡದೆ ಒಳಗೆ ಹೊರಗೆ |

ಎಲ್ಲ ಠಾವಿನಲ್ಲಿ ಗೌರಿ ವಲ್ಲಭನಿದ್ದಾನೆ || ಚಿಂತ್ಯಾಕೆ ||


ಹಿಂದೆ ನಿನ್ನ ಸಲಹಿದರ‍್ಯಾರೋ 

ಮುಂದೆ ನಿನ್ನ ಸಲಹುವರ‍್ಯಾರೋ 

ಅಂದಿಗೂ ಇಂದಿಗೂ ಎಂದಿಗೂ ನಂದಿ ವಾಹನನಿದ್ದಾನೆ  || ಚಿಂತ್ಯಾಕೆ ||


ನಾನು ನೀನು ಎಂಬ ಉಭಯ  

ಹೀನ ಗುಣಗಳೆಲ್ಲಾ ಕಳೆದು 

ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ || ಚಿಂತ್ಯಾಕೆ ||

Comments

Popular Posts