ಪೋಗಾದಿರೆಲೊ ರಂಗ

 

ಪೋಗಾದಿರೆಲೊ ರಂಗ

ಬಾಗಿಲಿಂದಾಚೆಗೆ ಪೋಗಾದಿರೆಲೊ ರಂಗ ||ಪ||


ಭಾಗವತರು ಕಂಡು ಎತ್ತಿ ಕೊಂಡೊಯ್ವರು ರಂಗ ||ಅ ಪ||


ಸುರಮುನಿಗಳು ತಮ್ಮ ಹ್ರದಯ ಕಮಲದಲ್ಲಿ

ಪರಮಾತ್ಮನ ಕಾಣದೆ ಅರಸುವರು |

ದೊರಕದ ವಸ್ತುವು ದೊರಕಿತು ತಮಗೆಂದು

ಹರುಷಾದಿಂದಲಿ ನಿನ್ನ ಕರದೆತ್ತಿ ಕೊಂಬುವರು      ||ಪೋಗಾದಿರೆಲೊ ರಂಗ ||


ಅಗಣಿತ ಗುಣ ನಿನ್ನ ಜಗದನಾರಿಯರೆಲ್ಲಾ

ಹಗೆಯಾಗಿ ನುಡಿದರು ಗೋಪಾಲನೆ |

ಮಗುಗಳ ಮಾಣಿಕ್ಯ ತಗಲೀತು ಕರಕೆಂದು

ವೇಗದಿಂದಲಿ ಬಂದು ಬಿಗಿದಪ್ಪಿಕೊಂಬುವರು       ||ಪೋಗಾದಿರೆಲೊ ರಂಗ||


ಧಿಟ್ಟ ನಾರಿಯಾರೆಲ್ಲ ಇಷ್ಟವ ಸಲಿಸೆಂದು

ಅಟ್ಟಟ್ಟಿ ಬೆನ್ನಟ್ಟಿ ತಿರುಗುವಾರೊ |

ಸೃಷ್ಟೀಶ ಪುರಂದರ ವಿಠ್ಠಲ ರಾಯನೆ

ಇಷ್ಟಿಷ್ಟು ಬೆಣ್ಣೆಯ ಕೊಡುವೆನೋ ರಂಗಯ್ಯ           ||ಪೋಗಾದಿರೆಲೊ ರಂಗ||


Comments

Popular Posts