ಬಾರೋ ನಮ್ಮ ಮನೆಗೆ
ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ ||ಪ||
ಬಾರೋ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು ||ಅ ಪ||
ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀ ನರಹರಿ ಕಾಲರೂಪನ ತೋರ್ದ ।।ಬಾರೋ ।।
ವ್ಯಾಸ ನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರದಿ ಓದಿ ಮೆರೆವ ವ್ಯಾಸಮುನಿಯೇ ।।ಬಾರೋ ।।
ಮಂತ್ರ ಗೃಹದಲಿ ನಿಂತ ಸುಯತಿವರ್ಯ
ಅಂತ ತಿಳಿಯದೋ ನೀ ಅಂತರದೊಳು ।
ಭೂತಪ್ರೇತಗಳ ಘಾತಿಸಿ ಬಿಡುವಂತ
ಖ್ಯಾತಿಯುತ ಶ್ರೀನಾಥನ ಸ್ತುತಿಸುವೆ।।ಬಾರೋ ।।
ಕುಷ್ಟರೋಗಾದಿಗಳ ನಷ್ಟ ಮಾಡುವಂತ
ಅಷ್ಟ ಮಹಿಮೆಯುತ ಶ್ರೇಷ್ಠ ಮುನಿಯೇ ।
ಕರೆದರೆ ಬರುವೆಂಬ ಕೀರುತಿ ಕೇಳಿ ನಾ
ಕರೆದನೋ ಕರುಣದಿ ಕರವ ಪಿಡಿಯೋ ।।ಬಾರೋ ।।
ಭಕ್ತವತ್ಸಲನೆಂಬ ಬಿರುದಿನಿಂದಾದರ
ಭಕ್ತನ ಮೊರೆ ಕೇಳೋ ಮಧ್ವೇಶ ವಿಠಲದಾಸ ।।ಬಾರೋ ।।
Comments
Post a Comment