ತುಂಗಾತೀರದಿ ನಿಂತ
ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ
ಸಂಗೀತಪ್ರಿಯ ಮಂಗಳಸುಗುಣಿ ತರಂಗ ಮುನಿಕುಲೋತ್ತುಂಗ ಕಾಣಮ್ಮಾ||ಪ||
ಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ
ಜಲಜಮಣಿಯು ಕೊರಳೊಳು ತುಳಸಿಮಾಲೆಗಳು ಪೇಳಮ್ಮಯ್ಯ |
ಸುಲಲಿತ ಕಮಂಡಲ ದಂಡವನ್ನೆ ಧರಿಸಿಹನು ಪೇಳಮ್ಮಯ್ಯ
ಖುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ ||ತುಂಗಾ ||
ಸುಂದರ ಚರಣರವಿಂದ ಸುಭಕುತಿಯಲಿಂದ ಪೇಳಮ್ಮಯ್ಯ
ವಂದಿಸಿ ಸ್ತುತಿಸುವ ಭೂಸುರು ಬಲುವಿಂದ ಪೇಳಮ್ಮಯ್ಯ |
ಚಂದದಿಲಂಕೃತಿಯಿಂದ ಶೋಭಿಸುವ ಆನಂದ ಪೇಳಮ್ಮಯ್ಯ
ಹಿಂದೆ ವ್ಯಾಸಮುನಿಯೆಂದೆನಿಸಿದ ಕಮ್ಮಂದಿಗಳರಸಘದಿಂದ ರಹಿತನೆ || ತುಂಗಾ ||
ಅಭಿನವ ಜನಾರ್ಧನ ವಿಠ್ಠಲನ ಧ್ಯಾನಿಸುವ ಪೇಳಮ್ಮಯ್ಯ
ಅಭಿವಂದಿಪರಿಗೆ ಅಖಿಲಾರ್ಥಗಳ ಸಲ್ಲಿಸುವ ಪೇಳಮ್ಮಯ್ಯ |
ನಭಮಣಿಯಂದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇಂದ್ರಯತಿ, ಅಬುಜ ಭವಾಂಡದೊಳು ಪ್ರಬಲ ಕಾಣಮ್ಮ || ತುಂಗಾ ||
Comments
Post a Comment