ನಾರಾಯಣ ತೇ

 

ನಾರಾಯಣ ತೇ ನಮೋ ನಮೋ ಭವ
ನಾರದ ಸನ್ನುತ ನಮೋ ನಮೋ || ಪಲ್ಲವಿ ||

ಮುರಹರ ನಗಧರ ಮುಕುಂದ ಮಾಧವ
ಗರುಡಗಮನ ಪಂಕಜ ನಾಭ |
ಪರಮಪುರುಷ ಭವ ಭಂಜನ ಕೇಶವ
ನರಹರಿ ಶರೀರ ನಮೋ ನಮೋ || ನಾರಾಯಣ ತೇ||

ಜಲಧಿ ಶಯನ ರವಿ ಚಂದ್ರ ವಿಲೋಚನ
ಜಲರುಹ ಭವನುತ ಚರಣ ಯುಗ |
ಬಲಿಭಂಜನ ಗೋವರ್ಧನವಲ್ಲಭ
ನಳಿನೋದರ ತೇ ನಮೋ ನಮೋ || ನಾರಾಯಣ ತೇ ||

ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನರೂಪ |
ವೇದೋಧ್ಧಾರ ಶ್ರೀ ವೇಂಕಟನಾಯಕ 
ಪುರಂದರವಿಠಲ ತೇ ನಮೋ ನಮೋ || ನಾರಾಯಣ ತೇ || 

Comments

Popular Posts