ಹೊಂದಿ ಬದುಕಿರೊ
ಹೊಂದಿ ಬದುಕಿರೊ ರಾಘವೇಂದ್ರ ರಾಯರ
ಕುಂದದೆಮ್ಮನು ಕರುಣದಿಂದ ಪೊರೆವರ || ಪ ||
ನಂಬಿ ಸ್ತುತಿಸುವ ಜನಕದಂಬಕ್ಲಿಷ್ಟವ
ತುಂಬಿ ಕೊಡುವನು ಅನ್ಯರ್ಹ೦ಬಲೀಯನು || ಹೊಂದಿ||
ಅಲವಬೋಧರ ಸುಮತಿ ಜಲಧಿಚ೦ದಿರ
ಒಲಿದು ಭಕ್ತರ ಕಾಯ್ವ ಸುಲಭಸುಂದರ |
ಗುರುಸುಧಿಂದ್ರದರ ವಿಮಲ ಕರಜನೆನಿಪರ
ಸ್ಮರಿಸಿ ಸುರುಚಿರ ವಿಮಲಚರಣಪುಷ್ಕರ || ಹೊಂದಿ||
ಪಾಲಲೋಚನ ವಿನುತ ಮೂಲರಾಮನ
ಲೀಲೆಯನುದಿನ ತುತಿಪ ಶೀಲ ಸದ್ಗುಣ |
ಭೂತಭಾವನ ಜಗನ್ನಾಥ ವಿಠ್ಠಲನ
ಪ್ರೀತಿಪಾತ್ರನ ನಂಬಿರೀತನನುದಿನ || ಹೊಂದಿ||
Comments
Post a Comment