ವೀರ ಹನುಮ
ವೀರ ಹನುಮ ಬಹು ಪರಾಕ್ರಮ ||ಪ||
ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||
ರಾಮ ದೂತನೆನಿಸಿ ಕೊಂಡೆ ನೀ,
ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ |
ಜಾನಕಿಗೆ ಮುದ್ರೆಯಿತ್ತು, ಜಗತಿಗೆಲ್ಲ ಹರ್ಷವಿತ್ತು |
ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ ||ವೀರ||
ಗೋಪಿಸುತನ ಪಾದ ಪೂಜಿಸಿ ,
ಗದೆಯ ಧರಿಸಿ ಬಕಾಸುರನ ಸಂಹರಿಸಿದೆ |
ದ್ರೌಪದಿಯ ಮೊರೆಯ ಕೇಳಿ, ಮತ್ತೆ ಕೀಚಕನ್ನ ಕೊಂದು |
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ||ವೀರ||
ಮಧ್ಯಗೇಹನಲ್ಲಿ ಜನಿಸಿ ನೀ
ಬಾಲ್ಯದಲ್ಲಿ ಮಸ್ಕರೀಯ ರೂಪಗೊಂಡೆ ನೀ |
ಸತ್ಯವತಿಯ ಸುತನ ಭಜಿಸಿ, ಸನ್ಮುಖದಿ ಭಾಷ್ಯ ಮಾಡಿ |
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ ||ವೀರ||
Comments
Post a Comment