ಹಾಲಲ್ಲಾದರು ಹಾಕು

 

ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ |

ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ ||ಪ||


ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು ರಾಘವೇಂದ್ರ |

ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ, ಒಂದಾಗಿರುವೆ ರಾಘವೇಂದ್ರ ||ಅ ಪ||


ಬಿಸಿಲಲ್ಲಿ ಒಣಗಿಸು, ನೆರಳಲ್ಲಿ ಮಲಗಿಸು ರಾಘವೇಂದ್ರ |

ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ, ನಗುನಗುತ ಇರುವೆ ರಾಘವೇಂದ್ರ ||ಹಾಲಲ್ಲಾದರು ಹಾಕು ||


ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ |

ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೇ ಹೇಳು ರಾಘವೇಂದ್ರ ||ಹಾಲಲ್ಲಾದರು ಹಾಕು ||


ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ

ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ, ಬಾಳಿದರೆ ಸಾಕು ರಾಘವೇಂದ್ರ ||ಹಾಲಲ್ಲಾದರು ಹಾಕು ||

Comments

Popular Posts