ಕಂಗಳ್ಯಾತಕೋ
ಕಂಗಳ್ಯಾತಕೋ ಕಾವೇರಿ ರಂಗನ ನೋಡದ || ಪ ||
ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ || ಅ ಪ ||
ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು |
ಚಂದ್ರಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದಲಿ ರಂಗನ ನೋಡದ || ಕಂಗಳ್ಯಾತಕೋ ||
ಹರಿಪಾದೋದಕ ಸಮ ಕಾವೇರಿ
ವಿರಜಾ ನದಿಯಲ ಸಾನವ ಮಾಡಿ |
ಪರಮ ವೈಕುಂಠ ರಂಗನ ಮಂದಿರ
ಪರ ವಾಸುದೇವನ ನೋಡದ ||ಕಂಗಳ್ಯಾತಕೋ ||
ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರವ ಧರಿಸಿ |
ತೇರನೇರಿ ಬೀದಿಲಿ ಮೆರೆವ
ರಂಗವಿಠಲ ರಾಯನ ನೋಡದ || ಕಂಗಳ್ಯಾತಕೋ ||
Comments
Post a Comment