ಈಸಬೇಕು
ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸ೦ಸಾರದಲ್ಲಿ ಆಶಾ ಲೇಶ ಮಾಡದ್ಹಾ೦ಗೆ ||ಪ||
ತಾಮರಸ ಜಲದ೦ತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊ೦ಬರೆಲ್ಲ ||ಈಸಬೇಕು||
ಗೇರು ಹಣ್ಣಿನಲ್ಲಿ ಬೀಜ ಸೇರಿದ೦ತೆ ಸ೦ಸಾರದಿ
ಮೀರೀ ಆಸೆ ಮಾಡದಂತೆ ಧೀರ ಕೃಷ್ಣನ ಭಕುತರೆಲ್ಲ ||ಈಸಬೇಕು||
ಮಾ೦ಸದಾಸೆಗೆ ಮತ್ಸ್ಯ ಸಿಲುಕಿ ಹಿ೦ಸೆಪಟ್ಟ ಪರಿಯಂತೆ
ಮೋಸ ಹೋಗದ್ಹಾ೦ಗೆ ಜಗದೀಶ ಪುರಂದರವಿಠಲನ ನೆನೆದು ||ಈಸಬೇಕು||
Comments
Post a Comment