ರಾಮನಾಮ ಪಾಯಸಕ್ಕೆ
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ||ಪ ||
ಒಮ್ಮನ ಗೋಧಿಯ ತಂದು, ವೈರಾಗ್ಯ ಕಲ್ಲಲಿ ಬೀಸಿ |
ಸುಮ್ಮನ ಸಜ್ಜಿಗೆ ತೆಗೆದು ಸಣ್ಣ ಶಾವಿಗೆ ಮಾಡಿರೋ ||ರಾಮನಾಮ||
ಹೃದಯವೆಂಬೊ ಪಾತ್ರೆಯಲ್ಲಿ ಭಾವವೆಂಬೊ ಎಸರು ಇಟ್ಟು |
ಬುದ್ದಿಯಿಂದ ಪಕ್ವವ ಮಾಡಿ ಹರಿವಾಣದಿ ಬಡಿಸಿಕೊಂಡು ||
ಆನಂದ ಆನಂದವೆಂಬೊ ತೇಗು ಬಂದಾಗ, ಎರಡು ತೇಗು ಬಂದಾಗ |
ಆನಂದಮೂರುತಿ ನಮ್ಮ ಪುರಂದರವಿಠಲ ನೆನೆಯಿರೊ ||ರಾಮನಾಮ||
Comments
Post a Comment