ಕೃಷ್ಣಾ ಕೃಪೆ ಮಾಡೋ
ಕೃಷ್ಣಾ ಕೃಪೆ ಮಾಡೋ ||ಪ||
ಕಣ್ಣ ಮುಂದಾಡೋ, ಇಷ್ಟಾರ್ಥ ವರಗಳ ಎನಗೆ ನೀಡೋ ||
ಕೃಷ್ಣಾ ಕೃಪೆ ಮಾಡೋ ||ಅ ಪ||
ನಂದಕುಮಾರ ನವನೀತ ಚೋರ|
ಬೃಂದಾವನಾಂತರ ಸಂಚಾರ ||ಕೃಷ್ಣಾ||
ರೋಗವರ್ಜಿತನೇ ಕೌಸ್ತುಭಧರನೇ |
ರಾಧಮುಖಾಂಬುಜ ದಿನಧರನೇ ||ಕೃಷ್ಣಾ||
ಯಧುಕುಲ ತಿಲಕ ಯಶೋದೆ ಬಾಲಕ|
ಮದನಜನಕ ಮಧ್ವಪತಿ ವಿಠಲ ||ಕೃಷ್ಣಾ||
Comments
Post a Comment