ರೋಗಹರನೆ ಕೃಪಾಸಾಗ

 

ರೋಗಹರನೆ ಕೃಪಾಸಾಗರ ಶ್ರೀಗುರು

ರಾಘವೇಂದ್ರ ಪರಿಪಾಲಿಸೋ || ಪ ||


ಸಂತತ ದುರ್ವಾದಿದ್ವಾನ್ತ ದಿವಾಕರ

ಸಂತವಿನುತ ಮಾತ ಲಾಲಿಸೊ || ರೋಗಹರನೆ ||


ಪಾವನಗಾತ್ರ ಭೂದೇವವರನೆ ತವ

ಸೇವಕಜನರೊಳಗಾಡಿಸೋ || ರೋಗಹರನೆ ||


ಘನ್ನಮಹಿಮ ಜಗನ್ನಾಥವಿಠ್ಠಲ ಪ್ರಿಯ

ನಿನ್ನಾರಾಧನೆ ಮಾಡಿಸೋ || ರೋಗಹರನೆ ||

Comments

Popular Posts