ಪಂಢರಾಪುರವೆಂಬ

 

ಪಂಢರಾಪುರವೆಂಬ ದೊಡ್ಡ ನಗರ

ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ ||


ವಿಠೋಬನಿರುವದು ನದಿತೀರ

ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ||


ಜೈ ಜೈ ವಿಠ್ಠಲ ಪಾಂಡುರಂಗ

ಜಯ ಹರಿ ವಿಠ್ಠಲ ಪಾಂಡುರಂಗ ||


ತಂದೆ ನೀನೆ ತಾಯಿ ನೀನೆ ಪಾಂಡುರಂಗ

ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ |

ಭಕ್ತರ ಪೋಷಕ ಪಾಂಡುರಂಗ

ನಮ್ಮ ಮುಕ್ತಿದಾಯಕ ಪಾಂಡುರಂಗ ||ಪಂಢರಾಪುರ||


ವಿಠೋಬನಿಗೆ ಪ್ರಿಯ ತುಳಸಿಹಾರ

ಅಲ್ಲಿ ಭಕ್ತ ಜನರ ವ್ಯಾಪಾರ |

ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ

ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||ಪಂಢರಾಪುರ||


ಶ್ರೀಹರಿ ವಿಠ್ಠಲ ಪಾಂಡುರಂಗ

ಜಯ ಹರಿ ವಿಠ್ಠಲ ಪಾಂಡುರಂಗ |

ವಿಠ್ಠಲ ವಿಠ್ಠಲ ಪಾಂಡುರಂಗ

ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||ಪಂಢರಾಪುರ||


Comments

Popular Posts