ಶ್ರೀನಿವಾಸ ನೀನೇ ಪಾಲಿಸೋ

 

ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲ

ಗಾನಲೋಲ ಶ್ರೀ ಮುಕುಂದನೇ || ಪ ||


ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ

ವೇಣುಗೋಪಾಲಾ ಗೋವಿಂದ ವೇದವೇದ್ಯ ನಿತ್ಯಾನಂದ ||ಅಪ||


ಎಂದಿಗೆ ನಿನ್ನಯ ಪಾದವ ಪೊಂದುವ ಸುಖ

ಎಂದಿಗೆ ಲಭ್ಯವೋ ಮಾಧವ |

ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊ

ಅಂದದಿಂ ಭವಾಬ್ದಿಯೊಳು  ಬೆಂದು ನೊಂದೇನೊ ಮುಕುಂದ ||ಶ್ರೀನಿವಾಸ||


ಎಷ್ಟು ದಿನ ಕಷ್ಟ ಪಡುವುದೊ ಯಶೋದೆ ಕಂದ

ದೃಷ್ಟಿಯಿಂದ ನೋಡಲಾಗದೆ |

ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ 

ದುಷ್ಟ ಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕೈಯಪಿಡಿದು ||ಶ್ರೀನಿವಾಸ||


ಅನಿದಿನ ಅನೇಕ ರೋಗಂಗಳಾ ಅನುಭವಿಸುವೆನು

ಘನ್ನ ಮಹಿಮ ನೀನೆ ಕೇಳೆಯಾ |

ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ

ಹನುಮದೀಶ ಪುರನ್ದರ ವಿಠಲನೇ ಕೈಯ್ಯಾ ಪಿಡಿದು||ಶ್ರೀನಿವಾಸ||

Comments

Popular Posts