ಹೊಡಿ ನಗಾರಿ

 

ಹೊಡಿ ನಗಾರಿ ಮೇಲೆ ಕೈಯ್ಯ

ಗಡಗಡ ಹೊಡಿ ನಗಾರಿ ಮೇಲೆ ಕೈಯ್ಯ ||ಪ||


ಧೃಡ ವಂದ್ಯನ ಪಾದ ಬಿಡದೆ ಭಾಜಿಪರಾಗ |

ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು ||ಹೊಡಿ||


ವೇದ ಗಮ್ಯ ಸಕಲಾರ್ಧಿ ನಿವಾರಕ |

ಮೊದವೀವ ಮಧುಸೂದನ ಪರನೆಂದು||ಹೊಡಿ||


ಗಾನಲೋಲ ತನ್ನ ಧ್ಯಾನಿಸುವರನೆಲ್ಲ |

ಮಾನದಿಂದಲೆ ಕಾಯ್ವ ಶ್ರೀ ನಿಧಿ ಪರನೆಂದು ||ಹೊಡಿ||


ಈ ಪೃಥ್ವಿಯೊಳು ವ್ಯಾಪಕವಾಗಿಹ |

ಶ್ರೀಪತಿ ಪುರಂದರ ವಿಠ್ಠಲನೇ ಪರನೆಂದು ||ಹೊಡಿ||

Comments

Popular Posts