ಊರಿಗೆ ಬಂದರೆ ದಾಸಯ್ಯ

 

ಊರಿಗೆ ಬಂದರೆ ದಾಸಯ್ಯ 

ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ||ಪ||


ಕೈಲಿ ಕೋಲು ಕೊಳಲು ದಾಸಯ್ಯ 

ಕಲ್ಲಿಗೆ ವರವಿತ್ತೆ ದಾಸಯ್ಯ |

ಮಲ್ಲನ ಮರ್ದಿಸಿ ಮಾವನ ಮಡುಹಿದ

ನೀಲಮೇಘಶ್ಯಾಮ ದಾಸಯ್ಯ ||ಊರಿಗೆ||


ಕೊರಳೊಳು ವನಮಾಲೆ ದಾಸಯ್ಯ

ಬಲುಗಿರಿಯನು ನೆಗಹಿದೆ ದಾಸಯ್ಯ |

ಇರುಳು ಹಗಲು ನಿನ್ನ ಕಾಣದೆ ಇರಲಾರೆ

ಮರುಳು ಮಾಡುವಂಥ ದಾಸಯ್ಯ|| ಊರಿಗೆ||


ಆದಿನಾರಾಯಣ ದಾಸಯ್ಯ

ಮೋದದೊಂದು ಸಾಸಿರ ನಾಮದ ದಾಸಯ್ಯ |

ಮೇದಿನಿಯೊಳು ಪುಟ್ಟಿ ಗೋವ್ಗಳ ಕಾಯ್ದ

ಆದಿಕೇಶವರಾಯ ಆದಿಕೇಶವರಾಯ ಆದಿಕೇಶವರಾಯ ದಾಸಯ್ಯ||ಊರಿಗೆ||

Comments

Popular Posts