ನಾ ಡೊಂಕಾದರೇನು
ನಾ ಡೊಂಕಾದರೇನು ನಿನ್ನ ನಾಮ ಡೊಂಕೆ ವಿಠಲ ||ಪ||
ನದಿಯು ಡೊಂಕಾದರೇನು ಉದಕ ಡೊಂಕೆ ವಿಠಲ|
ಕಬ್ಬು ಡೊಂಕಾದರೇನು ಸಿಹಿಯು ಡೊಂಕ ವಿಠಲ ||ನಾ||
ಪುಷ್ಪ ಡೊಂಕಾದರೇನು ಗಂಧ ಡೊಂಕೆ ವಿಠಲ|
ಆಕಳು ಡೊಂಕಾದರೇನು ಹಾಲು ಡೊಂಕೆ ವಿಠಲ |
ಬಿಲ್ಲು ಡೊಂಕಾದರೇನು ಬಾಣ ಡೊಂಕೆ ವಿಠಲ||ನಾ||
ನಾನು ಹೊಲೆಯನಾದರೆ ನಿನ್ನ ನಾಮ ಹೊಲೆಯೆ ವಿಠಲ |
ಅಜ್ಯನಾದರೇನು ಕಾಯೋ ಸುಜ್ಯ ಪುರಂದರ ವಿಠಲ ||ನಾ||
Comments
Post a Comment