ಒಮ್ಮೆ ನಿನ್ನ ವೀಣೆಯನ್ನು
ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ
ಸುಮ್ಮನಿರುವ ತಂತಿಯನ್ನು ಮೀಟಲಾರೆಯ ||ಪ||
ತಾಳಲಾರೆ ರಾಘವೇಂದ್ರ ಕೇಳುವಾಸೆಯ
ಬಾಳಿನಲ್ಲಿ ಬೆರೆಸು ನಿನ್ನ ನಾದಮಹಿಮೆಯ ||ಅ ಪ||
ಗಾನ ಲಹರಿ ಜಗವನೆಲ್ಲ ತುಂಬಿ ಕುಣಿಸಲಿ
ಧ್ಯಾನದಲ್ಲಿ ಲೀನವಾಗಿ ಜೀವ ನಲಿಯಲಿ |
ನಾನು ಎಂಬ ಭಾವವಿಂದೆ ಕರಗಿ ಹೋಗಲಿ
ನೀನೇ ತನುವ ಮನವ ತುಂಬಿ ಬಾಳ ಬೆಳಗಲಿ ||ಒಮ್ಮೆ ನಿನ್ನ ವೀಣೆಯನ್ನು ||
ವೇದಘೋಷ ಜೊತೆಗೆ ಸೇರಿ ಶೃತಿಯ ಬೆರಸಲಿ
ನಾದಗಂಗೆಯಲ್ಲಿ..ಜೀವ ರಾಶಿ ಮುಳುಗಲಿ |
ಶಾರದೆಯೇ ಮೈ ಮರೆತು ತಲೆಯ ದೂಗಲಿ
ಶಾರದೆಯೇ ಮೈ ಮರೆತು ತಲೆಯ ದೂಗಲಿ ||ಒಮ್ಮೆ ನಿನ್ನ ವೀಣೆಯನ್ನು ||
Comments
Post a Comment